ಒಳನೋಟ ಮತ್ತು ಧ್ಯೇಯ

ಒಳನೋಟ

ಸಂಶೋಧನೆಯಲ್ಲಿ ಉತ್ಕೃಷ್ಠತೆ ಸಾಧಿಸುವ ಹಂಬಲ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಭವಿಷ್ಯದ ನಾಯಕರನ್ನು ತರಬೇತುಗೊಳಿಸಲು ಜಾಗತಿಕ ಮಟ್ಟದ ಶಿಕ್ಷಣ ಲಭ್ಯವಾಗಿಸುವುದು, ಆವಿಷ್ಕಾರಕ್ಕೆ ಉತ್ತೇಜನ ಹಾಗೂ ಭಾರತದಲ್ಲಿ ಸಂಪನ್ಮೂಲ ಸೃಷ್ಟಿ, ಸಾಮಾಜಿಕ ಅಭ್ಯುದಯಕ್ಕಾಗಿ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಪ್ರಪಂಚದ ಅಗ್ರಮಾನ್ಯ ಶೈಕ್ಷಣಿಕ ಸಂಸ್ಥೆಯಾಗುವುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಗುರಿಯಾಗಿದೆ.

ಧ್ಯೇಯ

ನಮ್ಮ ಕನಸನ್ನು ಈ ಕೆಳಕಂಡಂತೆ ಸಾಕಾರಗೊಳಿಸುವುದೇ ನಮ್ಮ ಧ್ಯೇಯವಾಗಿದೆ:

  • ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೂಲಭೂತ ಹಾಗೂ ಆನ್ವಯಿಕ ಸಂಶೋಧನಾ ವಲಯಗಳಲ್ಲಿ ಜಾಗತಿಕ ಮಟ್ಟದ ಉನ್ನತ ಶಿಕ್ಷಣ ಲಭ್ಯವಾಗಿಸುವುದು.
  • ಅತ್ಯಂತ ಪರಿಣಾಮಕಾರಿ ಸಂಶೋಧನೆಗಳನ್ನು ನಡೆಸುವುದು, ಹೊಸ ಜ್ಞಾನ ಸೃಷ್ಟಿ ಮತ್ತು ಪ್ರತಿಷ್ಠಿತ ನಿಯತಕಾಲಿಕಗಳು ಹಾಗೂ ಸಂಕಿರಣಗಳ ಮೂಲಕ ಇವುಗಳ ಪ್ರಸರಣ
  • ರಾಷ್ಟ್ರೀಯ ವಿಜ್ಞಾನ ಮತ್ತು ತಾಂತ್ರಿಕ ಅಭಿಯಾನಗಳ ಯಶಸ್ಸಿಗಾಗಿ ಬೋಧನಾ ಪರಿಣತಿಯ ಬಳಕೆ
  • ವಿವಿಧ ವಲಯಗಳಲ್ಲಿನ ಬೆಳವಣಿಗೆಗಳ ಹಿಂದಿನ ತತ್ವ ಹಾಗೂ ತಾಂತ್ರಿಕತೆಗಳನ್ನು ಅರಿಯುವ ದಿಸೆಯಲ್ಲಿ ವಿಸ್ತೃತ ಜ್ಞಾನಾರ್ಜನೆ ಮತ್ತು ಉದ್ದಿಮೆ & ಸಮಾಜಗಳಿಗೆ ಬಳಸಿಕೊಳ್ಳಲು ಅನುವಾಗುವಂತೆ ಜ್ಞಾನಾಭಿವೃದ್ಧಿ