ಉಪ ನಿರ್ದೇಶಕರು

ಪ್ರೊ. ಜಯಂತ್ ಎಂ ಮೊದಕ್ (ಆಡಳಿತ ಮತ್ತು ಹಣಕಾಸು)
ದೂರವಾಣಿ: 91- 80 – 2293 3108
ಇ-ಮೇಲ್: dd.anf@iisc.ac.in

ಜಯಂತ್ ಎಂ.ಮೋದಕ್ ಅವರು ಇಂಡಿಯಾನಾ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ-ಇರ್ವಿನ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ 1989ರಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ಐಐಎಸ್ ಸಿ ಸೇರಿದರು. ಇಲ್ಲಿ ಬಯೋಪ್ರೋಸೆಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನಾ ಚಟುವಟಿಕೆಗೆ ಚಾಲನೆ ನೀಡಿದರು. ಮಾಡೆಲಿಂಗ್, ಆಪ್ಟಿಮೈಸೇಜನ್, ಹುದುಗಿಸುವಿಕೆ ಪ್ರಕ್ರಿಯೆಗಳ ನಿಯಂತ್ರಣ ಮತ್ತು ತ್ಯಾಜ್ಯ ನೀರು ಸಂಸ್ಕರಣೆಗಾಗಿ ಸುಧಾರಿತ ಉತ್ಕರ್ಷಣಾ ತಾಂತ್ರಿಕತೆಗಳಿಗೆ ಒತ್ತು ನೀಡಿ ಸಂಶೋಧನಾ ನಿರತರಾದರು.

ಮೋದಕ್ ಅವರು ಐಐಎಸ್ ಸಿಯಲ್ಲಿ ಸೊಸೈಟಿ ಆಫ್ ಇನ್ನೊವೇಷನ್ ಅಂಡ್ ಡೆವಲಪ್ ಮೆಂಟ್ (ಆವಿಷ್ಕಾರ ಮ್ತು ಅಭಿವೃದ್ಧಿ ಸಂಘ)ನ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು. ಜೊತೆಗೆ, ಬೌದ್ಧಿಕ ಹಕ್ಕುಸ್ವಾಮ್ಯ ಕೋಶದ ಛೇರ್ ಪರ್ಸನ್ ಆಗಿಯೂ ಕಾರ್ಯನಿರ್ವಹಿಸಿದರು. ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ನಿಯಮಿತದ ಸ್ವತಂತ್ರ ನಿರ್ದೇಶಕರೂ ಆಗಿದ್ದರು. ಇವರು, ಅಲಹಾಬಾದ್ ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ನ ಫೆಲೋ ಕೂಡ ಆಗಿದ್ದಾರೆ. ಭಾರತೀಯ ರಾಸಾಯನಿಕ ಎಂಜಿನಿಯರ್ ಗಳ ಸಂಸ್ಥೆಯ ಪಿ.ಸಿ.ರೇ ಮತ್ತು ಅಮರ್ ಡೈ ಕೆಮ್ ಪುರಸ್ಕಾರಗಳು ಅವರಿಗೆ ಸಂದಿವೆ. ಕರ್ನಾಟಕ ರಾಜ್ಯದ ಸಿ.ವಿ.ರಾಮನ್ ಪುರಸ್ಕಾರ ಮತ್ತು ಭಾರತ ಸರ್ಕಾರ ಜೈವಿಕ ತಂತ್ರಜ್ಞಾನ ಇಲಾಖೆಯ ಜೈವಿಕ ತಂತ್ರಜ್ಞಾನ ಪ್ರಕ್ರಿಯೆ ಅಭಿವೃದ್ಧಿ ಪುರಸ್ಕಾರಗಳಿಗೆ ಕೂಡ ಪಾತ್ರರಾಗಿದ್ದಾರೆ.

ಪ್ರೊ. ರುದ್ರ ಪ್ರತಾಪ್(ಯೋಜನೆ ಮತ್ತು ಮೂಲಸೌಕರ್ಯ)
ದೂರವಾಣಿ: 91- 80 – 2293 3250
ಇ-ಮೇಲ್: dd.pni@iisc.ac.in

ರುದ್ರ ಪ್ರತಾಪ್ (ಪಿಎಚ್.ಡಿ., ಕಾರ್ನೆಲ್ ವಿಶ್ವವಿದ್ಯಾಲಯ, 1993. ಎಂ.ಎಸ್., ಅರಿಜೋನಾ ವಿಶ್ವವಿದ್ಯಾಲಯ, 1987. ಬಿ.ಟೆಕ್, ಐಐಟಿ ಖರಗ್ ಪುರ, 1985) ಅವರು ಬೆಂಗಳೂರು ಐಐಎಸ್ ಸಿ ಯಲ್ಲಿ ನ್ಯಾನೋ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದಲ್ಲಿ (CeNSE) ಪ್ರೊಫೆಸರ್ ಆಗಿದ್ದಾರೆ. ಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹ ಬೋಧಕರೂ ಆಗಿದ್ದಾರೆ. ಅವರು 2010ರವರೆಗೆ ಈ ವಿಭಾಗದಲ್ಲಿ ಪೂರ್ಣಾವಧಿ ಸೇವೆಯಲ್ಲಿದ್ದರು. ನಂತರ, CeNSE ಸ್ಥಾಪಕ ಛೇರ್ ಪರ್ಸನ್ ಆಗಿ ನಿಯುಕ್ತಿಗೊಂಡರು. 1996ರಲ್ಲಿ ಐಐಎಸ್ ಸಿ ಸೇರುವ ಮುನ್ನ ಕಾರ್ನೆಲ್ ವಿಶ್ವವಿದ್ಯಾಲಯದ ಸಿಬ್ಲಿ ಸ್ಕೂಲ್ ಆಫ್ ಮೆಕ್ಯಾನಿಕಲ್ ಅಂಡ್ ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಎರಡೂವರೆ ವರ್ಷಗಳ ಕಾಲ ಬೋಧಕರಾಗಿದ್ದರು. ಮೂಲತಃ ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಮತ್ತು ಡೈನಮಿಕ್ಸ್ ಆಫ್ ಮೈಕ್ರೋ ಅಂಡ್ ನ್ಯಾನೋ-ಸ್ಕೇಲ್ ಸಿಸ್ಟಮ್ಸ್ ಅವರ ಕಾರ್ಯಕ್ಷೇತ್ರಗಳಾಗಿವೆ. ವೈಬ್ರೌಅಕೌಸ್ಟಿಕ್ಸ್, ಬಯೋಅಕೌಸ್ಟಿಕ್ಸ್, ಮೆಕ್ಯಾನೋ-ಬಯಾಲಜಿ ಮತ್ತು ಕಾಂಪ್ಯುಟೇಷನಲ್ ಮೆಕ್ಯಾನಿಕ್ಸ್ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಸೇರಿವೆ. ಅವರು, ರಾಷ್ಟ್ರೀಯ ಎಂಜಿನಿಯರಿಂಗ್ ಅಕಾಡೆಮಿ ಮತ್ತು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಚುನಾಯಿತ ಫೆಲೋ ಆಗಿದ್ದಾರೆ.

ಉಪ ನಿರ್ದೇಶಕರ ಕಛೇರಿಯ ಇ-ಮೇಲ್: office.dd@iisc.ac.in