ಬೆಂಗಳೂರಿನಲ್ಲಿ ಜನವರಿ 31ರಿಂದ ಖಗೋಳಶಾಸ್ತ್ರದ 42ನೇ ಸಮಾವೇಶ


31 ಜನವರಿ 2024

ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾದ (ಭಾರತೀಯ ಖಗೋಳಶಾಸ್ತ್ರ ಸಂಸ್ಥೆ) 42ನೇ ಸಮಾವೇಶ ಈ ವಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ ಸಿ) ನಡೆಯಲಿದೆ. ಐಐಎಸ್‌ಸಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಜೆಎನ್ ತಾರಾಲಯದ ಸಹಯೋಗದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಕೈಗೊಳ್ಳಲಿರುವ ಉಪಕ್ರಮಗಳು ಹಾಗೂ ಸಮ್ಮೇಳನದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳಲು ಜನವರಿ 31, 2024ರ (ಬುಧವಾರ) ಸಂಜೆ 6.30ಕ್ಕೆ ಜೆಎನ್ ಟಾಟಾ ಸಂಕೀರ್ಣದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುವುದು. ಕಾರ್ಯಕ್ರಮದ ವಿಧ್ಯುಕ್ತ ಉದ್ಘಾಟನೆಯು 2024ರ ಫೆಬ್ರುವರಿ 1ರಂದು (ಗುರುವಾರ) ಬೆಳಿಗ್ಗೆ 9.30ಕ್ಕೆ ಐಐಎಸ್‌ಸಿಯ ಜೆಎನ್ ಟಾಟಾ ಮುಖ್ಯ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಭಾಗವಾಗಿ ಸೂರ್ಯ, ಗ್ರಹಗಳು, ಕಪ್ಪುಕುಳಿಗಳು ಮತ್ತು ಅದರಾಚೆಗಿನ ವಿಷಯಗಳ ಬಗ್ಗೆ ಜನವರಿ 31ರಿಂದ ಫೆಬ್ರುವರಿ 4ರವರೆಗೆ ವೈಜ್ಞಾನಿಕ ಸಂವಾದಗಳು ನಡೆಯಲಿವೆ. ಜೊತೆಗೆ, ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ ಜನಪ್ರಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಸುಮಾರು 750 ಖಗೋಳಶಾಸ್ತ್ರಜ್ಞರು ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಭಾರತ ಕೈಗೊಳ್ಳಲಿರುವ ಅಂತರಿಕ್ಷ ಅನ್ವೇಷಣೆಯ ಭವಿಷ್ಯ ಕಲ್ಪಿಸಲು ರಾಷ್ಟ್ರದಾದ್ಯಂತ ನಡೆಸಿದ ಚಟುವಟಿಕೆಗಳ ಚಿತ್ರಣವನ್ನು ಒಳಗೊಂಡಿರುವ “ಅಸ್ಟ್ರಾನಮಿ ವಿಷನ್” ಹೊತ್ತಿಗೆಯ ಬಿಡುಗಡೆ, ಭಾರತದ ಮೊದಲ ಬಾಹ್ಯಾಕಾಶ ನೆಲೆಯ ಸೌರ ವೀಕ್ಷಣಾಲಯ ಎಂಬ ಹಿರಿಮೆಗೆ ಪಾತ್ರವಾಗಿರುವ ಇತ್ತೀಚೆಗೆ ಕೈಗೊಂಡ ಆದಿತ್ಯL1 ಸೌರಯಾನ ಕುರಿತು ಕಾರ್ಯಾಗಾರ, ಭಾರತದ ಗ್ರಹಗಳ ಪರಿಶೋಧನೆ ಕಾರ್ಯಕ್ರಮ ಮತ್ತು ಪಲ್ಸರ್ ಟೈಮಿಂಗ್ ಅರೇ ಉಪಕ್ರಮಗಳ ಕುರಿತು ವಿದ್ವತ್ ಗೋಷ್ಠಿಗಳು ಈ ವರ್ಷದ ವಿಶೇಷ ಆಕರ್ಷಣೆಯ ಕಾರ್ಯಕ್ರಮಗಳಾಗಿವೆ. ಎಎಸ್ಐ ಪ್ರಶಸ್ತಿಗಳನ್ನು ಉದ್ಘಾಟನಾ ಗೋಷ್ಠಿಯಲ್ಲಿ ಪ್ರದಾನ ಮಾಡಲಾಗುತ್ತಿದ್ದು, ಇದು ಖಗೋಳಶಾಸ್ತ್ರ, ಭೌತಶಾಸ್ತ್ರ ಸಂಶೋಧನೆ ಹಾಗೂ ಸಾಮರ್ಥ್ಯವೃದ್ಧಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ನಾಗರಿಕರ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶ ಹೊಂದಿರುತ್ತದೆ.

ಸಭೆಯ ಬಗೆಗಿನ ಹೆಚ್ಚಿನ ಹೆಚ್ಚಿನ ವಿವರಗಳು https://astron-soc.in/asi2024 ಇಲ್ಲಿ ಲಭ್ಯವಿರುತ್ತದೆ.

ಸಾಮಾನ್ಯ ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕವಾಗಿ ಹಲವಾರು ಕಾರ್ಯಕ್ರಮಗಳನ್ನು ಕೂಡ ಯೋಜಿಸಲಾಗಿದೆ. ಆಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಜನಸಂಪರ್ಕ ಮತ್ತು ಶೈಕ್ಷಣಿಕ ಸಮಿತಿಯು ಸ್ಥಳೀಯ ಸಂಘಟಕರೊಂದಿಗೆ ಹಾಗೂ ಖಗೋಳಶಾಸ್ತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಬಾಹ್ಯಾಕಾಶ ಪರಿಶೋಧನೆಯಿಂದ ಹಿಡಿದು ಸಮಯ ಮತ್ತು ಕ್ಯಾಲೆಂಡರ್‌ಗಳನ್ನು ವ್ಯಾಖ್ಯಾನಿಸುವಲ್ಲಿ ಖಗೋಳಶಾಸ್ತ್ರದ ಪಾತ್ರದವರೆಗೆ ಜನಪ್ರಿಯ ಉಪನ್ಯಾಸಗಳನ್ನು ಏರ್ಪಡಿಸಿದೆ. ಖಗೋಳ- ಛಾಯಾಗ್ರಹಣ (ಆಸ್ಟ್ರೋಫೋಟೋಗ್ರಫಿ) ಕುರಿತು ಉಪನ್ಯಾಸಗಳನ್ನು ಯೋಜಿಸಲಾಗಿದ್ದು, ರಾತ್ರಿ ಆಕಾಶದಿಂದ ಕಾಣುವ ಭಾರತದ ಹಿಮಾಲಯ ಶ್ರೇಣಿ ಬಗ್ಗೆ ವಿಶೇಷ ಪ್ರದರ್ಶನ ಇರಲಿದೆ. ಆಕಾಶ ವೀಕ್ಷಣೆ ಪರಂಪರೆ ಸಂರಕ್ಷಿಸುವ ಅಗತ್ಯದ ಬಗ್ಗೆ ಗಮನಸೆಳೆಯುವ ಜೊತೆಗೆ ಸೌರಮಂಡಲ ವೀಕ್ಷಣೆ ಮತ್ತು ರಾತ್ರಿ ಆಕಾಶ ವೀಕ್ಷಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ನೆಹರು ತಾರಾಲಯದಲ್ಲಿ “ಸ್ಟಾರ್ ಪಾರ್ಟಿ”ಯನ್ನೂ ಯೋಜಿಸಲಾಗಿದೆ.

ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುವ ಕಾರ್ಯಕ್ರಮಗಳ ವಿವರವಾದ ಕಾರ್ಯಸೂಚಿ ಇಲ್ಲಿ ಲಭ್ಯವಿದೆ: https://astron- soc.in/outreach/

ಸಂಪರ್ಕ:

ಸ್ಥಳೀಯ ಸಂಘಟನಾ ಸಮಿತಿ:
ಬನಿಬ್ರತ ಮುಖೋಪಾಧ್ಯಾಯ
ಪ್ರಾಧ್ಯಾಪಕರು
ಭೌತಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: bm@iisc.ac.in

ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್ಐ): astron.soc.india@gmail.com

ಸಂವಹನ ಕಚೇರಿ (OoC)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: news@iisc.ac.in

ಪತ್ರಕರ್ತರಿಗೆ ಸೂಚನೆ:

ಎ) ಈ ಬಿಡುಗಡೆಯಲ್ಲಿನ ಯಾವುದೇ ಪಠ್ಯವನ್ನು ಮೌಖಿಕವಾಗಿ ಪುನರುತ್ಪಾದಿಸಿದ್ದರೆ, ದಯವಿಟ್ಟು ಐಐಎಸ್‌ಸಿ ಪತ್ರಿಕಾ ಪ್ರಕಟಣೆಯನ್ನು ಕ್ರೆಡಿಟ್ ಮಾಡಿ.
ಬಿ) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳ ಕುರಿತು ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.