ಕ್ವಾಂಟಮ್ ತಂತ್ರಜ್ಞಾನಗಳ ಸಂಶೋಧನೆ: ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್- ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗ


19 ಅಕ್ಟೋಬರ್, 2023

 

ವಿಶಿಷ್ಟವಾದ ಕ್ವಾಂಟಮ್ ತಂತ್ರಜ್ಞಾನ ಪ್ರಯೋಗಾಲಯ ಸ್ಥಾಪಿಸಲು ನೆರವು ಮಾಡಲು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ (SSIR) ಸಂಸ್ಥೆಯ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಇಂಡಿಯನ್ (ಐಐಎಸ್ಸಿ) ಸಹಯೋಗ ಮಾಡಿಕೊಂಡಿದೆ. ಇದು ಎಸ್.ಎಸ್.ಐ.ಅರ್.ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಬದ್ಧತೆಯೆಡೆಗಿನ ಒಂದು ಪ್ರಯತ್ನವಾಗಿದ್ದು, ಐಐಎಸ್ಸಿ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಭೌತಶಾಸ್ತ್ರ, ಎಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಮತ್ತು ಮತ್ತು ಗಣಿತಶಾಸ್ತ್ರವನ್ನು ಪ್ರತಿ ವರ್ಷವೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ನೂರಾರು ಸಂಖ್ಯೆಯ ಬೋಧಕ ವೃಂದದವರು ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನೆ ಹಾಗೂ ತರಬೇತಿ ಬೆಂಬಲದ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ಸ ಎಂಜಿನಿಯರಿಂಗ್ ವಿಭಾಗದ (ಡಿಇಎಸ್ಇ) ಸಹ-ಪ್ರಾಧ್ಯಾಪಕ ಮಯಾಂಕ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ ಈ ಪ್ರಯೋಗಾಲಯವು ಸುಧಾರಿತ ಕ್ವಾಂಟಮ್ ತಂತ್ರಜ್ಞಾನಗಳಿಗೆ ನಿಯೋಜಿತವಾದ ಪ್ರಮುಖ ಸೌಲಭ್ಯ ಕೇಂದ್ರವಾಗುವ ಗುರಿ ಹೊಂದಿದೆ.

ಈ ಸಂಬಂಧ ಏರ್ಪಟ್ಟ ಪರಸ್ಪರ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ಎಸ್ಎಸ್ಐಆರ್ ಸಿವಿಪಿ ಮತ್ತು ಎಂಡಿಎಟಿ ಬಾಲಾಜಿ ಸೌರಿರಾಜನ್ ಹಾಗೂ ಐಐಎಸ್ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ವಿನಿಮಯ ಮಾಡಿಕೊಂಡರು. ಈ ಪ್ರಯೋಗಾಲಯವು ತಾಂತ್ರಿಕ ಆವಿಷ್ಕಾರ, ಮಾನವ ಸಂಪನ್ಮೂಲ ತರಬೇತಿ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ವಾಂಟಮ್ ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದು, ದೇಶಿಯ ಕ್ವಾಂಟಮ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಗಮನ ನೀಡಲಿದ್ದು, ಸ್ಥಳೀಯ ಅಭಿವೃದ್ಧಿಗೆ ಹಾಗೂ ಭಾರತದ ಸಂಶೋಧನಾ ಆವಿಷ್ಕಾರಗಳನ್ನು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಸಾದರಪಡಿಸಲು ಗಮನಾರ್ಹ ಕೊಡುಗೆ ನೀಡಲಿದೆ.

“ಕ್ವಾಂಟಮ್ ತಂತ್ರಜ್ಞಾನ ಪ್ರಯೋಗಾಲಯ ಸ್ಥಾಪನೆಗಾಗಿ ಐಐಎಸ್ಸಿ ಜೊತೆಗಿನ ನಮ್ಮ ಪಾಲುದಾರಿಕೆಯು ಕ್ವಾಂಟಮ್ ತಂತ್ರಜ್ಞಾನಗಳಲ್ಲಿನ ಪ್ರಗತಿಯನ್ನು ಮುನ್ನಡೆಸುವ ಉದ್ದೇಶ ಹೊಂದಿದೆ. ಕೌಶಲ್ಯಯುಕ್ತ ಉದ್ಯೋಗಿಗಳನ್ನು ಸಬಲೀಕರಣಗೊಳಿಸುವ ಮೂಲಕ, ಸಹಭಾಗಿತ್ವದಿಂದ ನಾವೀನ್ಯತೆ ಉತ್ತೇಜಿಸುವ ಮೂಲಕ, ರಾಷ್ಟ್ರೀಯ ಸ್ಪರ್ಧಾತ್ಮಕತೆ ಬಲಪಡಿಸುವ ಮೂಲಕ ಮತ್ತು ಗಮನಾರ್ಹ ಸಾಮಾಜಿಕ ಪ್ರಭಾವದೊಂದಿಗೆ ಉದ್ದಿಮೆಗಳನ್ನು ಪರಿವರ್ತಿಸುವ ಮೂಲಕ ಇದನ್ನು ಸಾಧಿಸಲಾಗುವುದು. “ತಂತ್ರಜ್ಞಾನದ ಈ ಉನ್ನತೀಕರಣವು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕ್ವಾಂಟಂ ಆವಿಷ್ಕಾರ ಮತ್ತು ಉತ್ಕೃಷ್ಟತೆಗೆ ಸಂಬಂಧಿಸಿದಂತೆ ಭಾರತದ ಗಮನವನ್ನು ಮುನ್ನಡೆಸಲಿದೆ” ಎಂಬುದು ಎಸ್ ಎಸ್ ಐ ಆರ್ ನ ಸಿವಿಪಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಾಲಾಜಿ ಸೌರಿ ರಾಜನ್ ಅಭಿಪ್ರಾಯಪಡುತ್ತಾರೆ.

ಈ ಪ್ರಯೋಗಾಲಯವು ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ, ನಿರ್ದಿಷ್ಟವಾಗಿ ಭೌತಶಾಸ್ತ್ರ, ಎಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತಶಾಸ್ತ್ರ ಅಧ್ಯಯನ ಮಾಡುವವರಿಗೆ ಸಾಟಿಯಿರದ ಉತ್ಕೃಷ್ಟ ಪ್ರಾಯೋಗಿಕ ತರಬೇತಿ, ಸಂಶೋಧನಾ ಅನುಭವ ಮತ್ತು ಕ್ವಾಂಟಮ್ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಅವಕಾಶಗಳನ್ನು ಒದಗಿಸುತ್ತದೆ. ಈ ಮೂಲಕ ಅಧ್ಯಯನಾರ್ಥಿಗಳ ಉದ್ಯೋಗಾವಕಾಶ ಮತ್ತು ವೃತ್ತಿ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಕ್ವಾಂಟಮ್ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕರು ಮತ್ತು ವಿಜ್ಞಾನಿಗಳು ಇಲ್ಲಿನ ಅತ್ಯಾಧುನಿಕ ಮೂಲಸೌಕರ್ಯ, ಸಹಯೋಗ ಪರಿಸರ ಮತ್ತು ಅತ್ಯಾಧುನಿಕ ಸಂಪನ್ಮೂಲಗಳ ಲಭ್ಯತೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ಅವರಿಗೆ ಜ್ಞಾನದ ಗಡಿಗಳನ್ನು ವಿಸ್ತರಿಸಲು ಹಾಗೂ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ, ಸಂಶೋಧನೆಗೆ ಹೆಚ್ಚಿನ ಹಣ ಸಂಪನ್ಮೂಲ ಒದಗಿಸಲು ಸಾಧ್ಯವಾಗದ ಇತರ ಕಾಲೇಜುಗಳು ಮತ್ತು ಸಂಸ್ಥೆಗಳ ಬೋಧಕ ವೃಂದದವರಿಗೆ ಅಗತ್ಯ ಬೆಂಬಲ ಮತ್ತು ಸಂಪನ್ಮೂಲಗಳನ್ನು ಇದು ಒದಗಿಸುತ್ತದೆ.

ಪ್ರೊ.ಗೋವಿಂದನ್ ರಂಗರಾಜನ್ ಅವರು ಸಹಭಾಗಿತ್ವದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡು, ಭಾರತೀಯ ವಿಜ್ಞಾನ ಸಂಸ್ಥೆಯು ಕ್ವಾಂಟಮ್ ತಂತ್ರಜ್ಞಾನಗಳ ಸಂಶೋಧನೆಮ ಪ್ರಮುಖ ನೆಲೆಯಾಗಿ ಹೊರಹೊಮ್ಮಿದೆ. ಐಐಎಸ್ಸಿ ಯಲ್ಲಿನ ಈ ಹೊಸ ಕ್ವಾಂಟಂ ತಂತ್ರಜ್ಞಾನ ಪ್ರಯೋಗಾಲಯವು ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಭವಿಷ್ಯದ ಸಂಶೋಧನಾ ಧಾರೆಗಳಿಗೆ ನಾವು ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಎಸ್ಎಸ್ಐಆರ್ ಜೊತೆಗಿನ ಈ ಸಹಯೋಗವು ಸಂಸ್ಥೆಯ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪರಿಣತಿಯನ್ನು ಸಶಕ್ತಗೊಳಿಸಿ, ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಕ್ವಾಂಟಂ ತಂತ್ರಜ್ಞಾನಗಳ ಅಪರಿಮಿತ ಸಾಧ್ಯತೆಗಳನ್ನು ಅನ್ವೇಷಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ” ಎಂದರು.

ಉದ್ದೇಶಿತ ಕ್ವಾಂಟಮ್ ಪ್ರಯೋಗಾಲಯವು ಕ್ರಯೋಜೆನಿಕ್ ನಿಯಂತ್ರಿತ ಚಿಪ್ ಗಳನ್ನು ಕ್ಯುಬಿಟ್ಗಳು, ಏಕ ಫೋಟಾನ್ ಮೂಲಗಳು ಮತ್ತು ಡಿಟೆಕ್ಟರ್ಗಳೊಂದಿಗೆ ಸಂಯೋಜಿಸಿ, ಕ್ವಾಂಟಂ ತಾಂತ್ರಿಕತೆಗಳಲ್ಲಿ ವಿಶ್ವಾಸಾರ್ಹತೆಯ ಸವಾಲುಗಳನ್ನು ಪರಿಹರಿಸುತ್ತದೆ. ಪ್ರಯೋಗಾಲಯವು ಅಂತರಶಿಸ್ತೀಯ ಸಂಶೋಧನೆ, ಉದ್ಯಮ ಸಹಯೋಗಗಳು ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆ ಒದಗಿಸುವ ಮೂಲಕ ಆವಿಷ್ಕಾರಕ್ಕೆ ಪೂರಕವಾದ ಚಲನಶೀಲ ವಾತಾವರಣವನ್ನು ಬೆಳೆಸುತ್ತದೆ. ಇದರ ಮಹತ್ವವು ವೈಜ್ಞಾನಿಕ ತಿಳಿವಳಿಕೆಯ ಪ್ರಗತಿಯನ್ನು ಮೀರಿ ವಿಸ್ತರಣೆಗೊಂಡು ಜಾಗತಿಕವಾಗಿ ಸ್ಪರ್ಧಿಸಲು ಮತ್ತು ಸಮಾಜೋ-ಆರ್ಥಿಕ ಬೆಳವಣಿಗೆಗೆ ಕ್ವಾಂಟಂ ತಂತ್ರಜ್ಞಾನಗಳ ಬಲವನ್ನು ಬಳಸಿಕೊಳ್ಳಲು ಭಾರತವನ್ನು ಸಶಕ್ತಗೊಳಿಸುತ್ತದೆ.

ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಬಗ್ಗೆ:
ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ (ಎಸ್ಎಸ್ಐಆರ್), ಇದು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ ನ ಜಾಗತಿಕ ಜಾಲದ ಭಾಗವಾಗಿದ್ದು, ಕಾಂಪೊನೆಂಟ್ ಪರಿಹಾರಗಳು, ಸಿಸ್ಟಮ್ ಎಲ್ಎಸ್ಐ, ಮೆಮೊರಿ ಮತ್ತು ಫೌಂಡ್ರಿ ಕ್ಷೇತ್ರಗಳಲ್ಲಿ ಉದ್ಯಮ ಮುಂಚೂಣಿ ತಂತ್ರಜ್ಞಾನಗಳನ್ನು ಲಭ್ಯವಾಗಿಸುವುದರಲ್ಲಿ ತೊಡಗಿಸಿಕೊಂಡಿದೆ. ಎಸ್ಎಸ್ಐಆರ್ ನಲ್ಲಿ, ನಾವು ನಮ್ಮ ಎಂಜಿನಿಯರುಗಳಿಗೆ ಫೌಂಡೇಶನ್ ಐ.ಪಿ. ವಿನ್ಯಾಸ, ಸೀರಿಯಲ್ ಇಂಟರ್ಫೇಸ್ಗಳು, ಮಲ್ಟಿಮೀಡಿಯಾ ಐ.ಪಿ.ಗಳು, ಮೊಬೈಲ್ ಎಸ್ಒಸಿ ಗಳು, ಸಂಗ್ರಹಣಾ ಪರಿಹಾರಗಳು, 4G/5G ಪರಿಹಾರಗಳು, ನ್ಯೂರಲ್ ಪ್ರೊಸೆಸರ್ಗಳು, ಎ ಐ/ ಎಂಎಲ್ ಸೇರಿದಂತೆ ಇನ್ನೂ ಬಹಳಷ್ಟು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕಾರ್ಯನಿರತರಾಗಲು ಬುನಾದಿಯನ್ನು ಲಭ್ಯವಾಗಿಸುತ್ತೇವೆ. ಹೆಚ್ಚಿನ ವಿವರಗಳಿಗೆ, ದಯವಿಟ್ಟು ಭೇಟಿ ಕೊಡಿ: https://semiconductor.samsung.com/ssir/