ಐಐಎಸ್ಸಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ನಾವೀನ್ಯತಾ ಪ್ರತಿಷ್ಠಾನ (ಎಫ್‌ಕ್ಯೂಸಿಐ)


31 ಆಗಸ್ಟ್ 2026

ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಕ್ಯಾಂಟಮ್ ಮಿಷನ್‌ (NOM) ಅಡಿಯಲ್ಲಿ ಕ್ಯೂಸಿ ಇನ್ನೋವೇಷನ್ ಫೌಂಡೇಷನ್ (FQCI) ಅನ್ನು ಲಾಭರಹಿತ ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಿದೆ. ಐಐಎಸ್ಸಿಯಲ್ಲಿ ಡಿಎಸ್‌ಟಿ-ಎನ್ ಕ್ಯೂಎಂನ ಕ್ವಾಂಟಮ್ ಕಂಪ್ಯೂಟಿಂಗ್ ವಿಷಯನಿರ್ದಿಷ್ಟ ಕೇಂದ್ರವಾಗಿ (QC T-Hub) ಎಫ್‌ಕ್ಯೂಸಿಐ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್‌ ಅಡಿಯಲ್ಲಿ ಸ್ಥಾಪಿಸಲಾಗಿರುವ ನಾಲ್ಕು ವಿಷಯನಿರ್ದಿಷ್ಟ ಕೇಂದ್ರಗಳ ಪೈಕಿ ಇದು ಒಂದಾಗಿದೆ.

ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು, ಉದ್ಯಮ ಹಾಗೂ ಸ್ಮಾರ್ಟ್ ಅಪ್‌ಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಭಾರತದ ಕ್ವಾಂಟಮ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಬಲಪಡಿಸುವುದು ಎಫ್‌ಕ್ಯೂಸಿಐನ ಪ್ರಮುಖ ಉದ್ದೇಶವಾಗಿದೆ. ಈ ಸಹಯೋಗದ ಮೂಲಕ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ ನಿರ್ಮಾಣ, ಪ್ರತಿಭಾ ಸಂಪನ್ಮೂಲ ಸೃಷ್ಟಿ ಹಾಗೂ ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ತಂತ್ರಜ್ಞಾನಗಳಾಗಿ ಪರಿವರ್ತಿಸುವ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತದೆ. ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಫೋಟೋನಿಕ್, ಸೂಪ‌ರ್ ಕಂಡಕ್ಕಿಂಗ್, ಸೆಮಿಕಂಡಕ್ಟಿಂಗ್, ಸಿಲಿಕಾನ್-ಸ್ಪಿನ್, ನ್ಯೂಟ್ರಲ್-ಆಟಮ್ ಮತ್ತು ಟ್ರಾಪ್ಸ್-ಐಯಾನ್ ವ್ಯವಸ್ಥೆಗಳು ಸೇರಿದಂತೆ ವಿವಿಧ ವಿಧಾನಗಳಲ್ಲಿ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರವು ಒತ್ತು ನೀಡುತ್ತದೆ. ಇದರ ಜೊತೆಗೆ, ಕ್ಯಾಂಟಮ್ ಅಲ್ಲಾರಿದಮ್‌ಗಳ ಅಭಿವೃದ್ಧಿಯ ಮೇಲೂ ಗಮನ ಹರಿಸುತ್ತದೆ.

“ಬಲಿಷ್ಠವಾದ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಕ್ವಾಂಟಮ್ ಕಂಪ್ಯೂಟಿಂಗ್ ಕಾರ್ಯಪರಿಸರವನ್ನು ಭಾರತದಲ್ಲಿ ನಿರ್ಮಿಸಲು ರಾಷ್ಟ್ರೀಯ ಕ್ವಾಂಟಮ್ ಮಿಷನ್ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ. ಭಾರತದ ಸಂಶೋಧನಾ ಸಾಮರ್ಥ್ಯಗಳು, ಅತ್ಯಾಧುನಿಕ ಮೂಲಸೌಕರ್ಯ, ಉದ್ಯಮ ಹಾಗೂ ಉದ್ಯಮಶೀಲ ಪ್ರತಿಭೆಗಳನ್ನು ಒಗ್ಗೂಡಿಸುವ ಮೂಲಕ ಅತ್ಯಾಧುನಿಕ ಸಂಶೋಧನೆಯನ್ನು ಸ್ವದೇಶಿ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಮತ್ತು ಅವುಗಳ ಆನ್ವಯಿಕತೆಗಳಾಗಿ ಪರಿವರ್ತಿಸುವುದರ ಮೇಲೆ ನಾವು ಗಮನ ಎಫ್‌ಕ್ಯೂಸಿಐನಲ್ಲಿ ಗಮನ ಕೇಂದ್ರೀಕರಿಸುತ್ತೇವೆ. ಮೂಲಭೂತ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನೈಜ ಜಗತ್ತಿನ ಆನ್ವಯಿಕತೆಗಳು ಸಮಾನಾಂತರವಾಗಿ ಮುನ್ನಡೆಯುವಂತಹ ಕಾರ್ಯಪರಿಸರವನ್ನು ರೂಪಿಸುವುದು ನಮ್ಮ ಗುರಿಯಾಗಿದೆ” ಎಂದು ಐಐಎಸ್ಪಿಯ ನ್ಯಾನೊ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ (CeNSE) ಪ್ರಾಧ್ಯಾಪಕರು ಹಾಗೂ ಎಫ್‌ಕ್ಯೂಸಿಐ ಯೋಜನಾ ನಿರ್ದೇಶಕರಾದ ಶಂಕರ್ ಕುಮಾರ್ ಸೆಲ್ವರಾಜ ಅವರು ವಿವರಿಸುತ್ತಾರೆ.

ಕ್ವಾಂಟಮ್ ಸಾಧನಗಳ ತಯಾರಿಕೆ, ಗುಣಲಕ್ಷಣಗಳ ವಿಶ್ಲೇಷಣೆ, ಪರೀಕ್ಷೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗಾಗಿ ಎಲ್ಲರೂ ಹಂಚಿಕೊಂಡು ಬಳಸಬಹುದಾದ ವಿಶ್ವದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿಯೂ ಎಫ್‌ಕ್ಯೂಸಿಐ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಂಶೋಧನಾ ಫಲಿತಾಂಶಗಳನ್ನು ಕಾರ್ಯನಿರ್ವಹಿಸಬಲ್ಲ ತಂತ್ರಜ್ಞಾನಗಳಾಗಿ ಪರಿವರ್ತಿಸಲು ನೆರವಾಗುವ ಜೊತೆಗೆ, ಸ್ವದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಸಾಮರ್ಥ್ಯವು ಬಲಗೊಳ್ಳಲಿದೆ.

ಸಂಶೋಧನೆ ಮತ್ತು ಮೂಲಸೌಕರ್ಯದ ಜೊತೆಗೆ ಕ್ವಾಂಟಮ್ ಸನ್ನದ್ಧ ಭಾರತಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಉದ್ಯಮಶೀಲತೆಯ ಕಾರ್ಯಪರಿಸರವನ್ನೂ ಎಫ್‌ ಕ್ಯೂಸಿಐ ಅಭಿವೃದ್ಧಿಪಡಿಸುತ್ತಿದೆ. ಇದರ ಉಪಕ್ರಮಗಳು ವಿದ್ಯಾರ್ಥಿಗಳ ಸಂಶೋಧನೆ ಮತ್ತು ಇಂಟರ್ನ್‌ಶಿಪ್‌ಗಳು, ಉನ್ನತ ಮಟ್ಟದ ಸಂಶೋಧನೆ, ಉದ್ಯಮ- ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗ, ಸ್ಮಾರ್ಟ್ ಅಪ್‌ಗಳ ಅಭಿವೃದ್ಧಿ, ಜ್ಞಾನ ವಿನಿಮಯ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಚಟುವಟಿಕೆಗಳಿಗೆ ಬೆಂಬಲ ನೀಡುತ್ತವೆ. ಕ್ಯೂಸಿ ರೈಸ್‌ (QC RISE), ಕ್ಯೂಸಿ ಬ್ರಿಡ್ಜ್ (QC BRIDGE), ಕ್ಯೂಸಿ ಲೀಪ್ (QC LEAP), ಕ್ಯೂಸಿ ಅಕ್ಸೆಲ್ (QC ACCEL) ಮತ್ತು ಕ್ಯೂಸಿ ಕ್ಲಸ್ಟ್ (QC QUEST) ಇವು ಕೇಂದ್ರದ ಪ್ರಮುಖ ಕಾರ್ಯಕ್ರಮಗಳಾಗಿವೆ.

ರಾಷ್ಟ್ರೀಯ ಕ್ವಾಂಟಮ್ ಮಿಷನ್‌ ನ ಅಡಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ವಿಷಯನಿರ್ದಿಷ್ಟ ಕೇಂದ್ರವಾಗಿ (ಥೀಮ್ಯಾಟಿಕ್ ಹಬ್) ಕಾರ್ಯನಿರ್ವಹಿಸುವ ಮೂಲಕ ಬಲಿಷ್ಠವಾದ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಹಾಗೂ ನಾವೀನ್ಯತೆ ಆಧಾರಿತ ಕ್ವಾಂಟಮ್ ಕಂಪ್ಯೂಟಿಂಗ್ ಕಾರ್ಯಪರಿಸರವನ್ನು ಭಾರತದಲ್ಲಿ ಬೆಳೆಸುವುದು ಎಫ್‌ಕ್ಯೂಸಿಐನ ಉದ್ದೇಶವಾಗಿದೆ. ಇದರ ಜೊತೆಗೆ, ವ್ಯಾಪಕವಾಗಿ ವಿಸ್ತರಿಸಬಹುದಾದ ಸ್ವದೇಶಿ ಕ್ವಾಂಟಮ್ ತಂತ್ರಜ್ಞಾನಗಳ ಅಭಿವೃದ್ಧಿಗೆ ಮತ್ತು ಸಂಶೋಧನೆ, ಉದ್ಯಮ ಹಾಗೂ ಸಾಮಾಜಿಕ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವುಗಳ ಭವಿಷ್ಯದ ಆನ್ವಯಿಕತೆಗಳಿಗೆ ಕೊಡುಗೆ ನೀಡುವ ಗುರಿಯನ್ನೂ ಈ ಕೇಂದ್ರ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://qcinnovation.co.in/

ಎಫ್‌ಕ್ಯೂಸಿಐನಿಂದ ಸುದ್ದಿ ಮತ್ತು ಪರಿಷ್ಕೃತ ಮಾಹಿತಿ ಪಡೆಯಲಿಚ್ಚಿಸುವ ಪತ್ರಕರ್ತರು ಇಲ್ಲಿ ನೋಂದಣಿ ಮಾಡಿಸಿಕೊಳ್ಳಿ: https://zfrmz.in/QKuqfAxlzj6dr1TVuVUA