ವಿಭಾಗೀಯ ಡೀನ್ ಗಳು

ಡೀನ್, ಜೈವಿಕ ವಿಜ್ಞಾನ ವಿಭಾಗ
ಪ್ರೊ. ಉಷಾ ವಿಜಯರಾಘವನ್
ಸಂಚಾಲಕ, ವಿಭಾಗೀಯ ಡೀನ್ ಗಳು
ಇ-ಮೇಲ್: dean.bio@iisc.ac.in
ದೂರವಾಣಿ: 91 – 80 – 2293 2478/2809/2686/ 3601
080-22932681 (Department Lab); 23600168 (Department Office)

ಉಷಾ ವಿಜಯರಾಘವನ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಪದವಿ ಪಡೆದರು; ಬಳಿಕ ಚಂಡಿಗಢದ ಸ್ನಾತಕೋತ್ತರ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಅಗ್ರ ಶ್ರೇಯಾಂಕದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಯೀಸ್ಟ್ ಜೆನೆಟಿಕ್ಸ್ ಕುರಿತಾದ ಸಂಶೋಧನೆಗಾಗಿ 1989ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್)ಯಿಂದ ಪಿಎಚ್‌ಡಿ ಪದವಿ ಪಡೆದರು. ಬಳಿಕ ಅವರು ಸಸ್ಯಗಳ ಬೆಳವಣಿಗೆಯನ್ನು ನಿಯಂತ್ರಿಸುವ ಆನುವಂಶಿಕ ಅಂಶಗಳ ಕುರಿತಾದ ಡಾಕ್ಟರೇಟ್ ನಂತರದ ಸಂಶೋಧನೆಯನ್ನು ಕ್ಯಾಲ್ಟೆಕ್‌ ಸಂಸ್ಥೆಯಲ್ಲಿ ಮುಂದುವರೆಸಿದರು. 1990 ರಲ್ಲಿ ಐಐಎಸ್ಸಿಗೆ ಸೇರಿದ ಅವರು ಪ್ರಸ್ತುತ ಸೂಕ್ಷ್ಮ ಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಸಂಶೋಧನೆ ಮತ್ತು ಬೋಧನಾ ಆಸಕ್ತಿಗಳು ಜೀವಕೋಶ ಪ್ರಭಾವಿ, ಯೀಸ್ಟ್ ಮಾದರಿಗಳು ಮತ್ತು ಜೀನ್ ನಿಯಂತ್ರಕ ಕಾರ್ಯವಿಧಾನಗಳ ವಿಷಯಗಳನ್ನೊಳಗೊಂಡಿವೆ. ಇವರ ಸಂಶೋಧನೆಗಳು ಭತ್ತದ ಸಸಿ ಹೂಬಿಡುವ-ಕಾಂಡ ಮತ್ತು ಹೂವಿನ ಬೆಳವಣಿಗೆಯನ್ನು ನಿಯಂತ್ರಿಸುವ ನಿಯಂತ್ರಕ ಜಾಲಗಳನ್ನು ವಿಶೇಷವಾಗಿ ಒಳಗೊಂಡಿವೆ. ಅವರು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಫೆಲೊ ಆಗಿದ್ದು, ಹತ್ತು ವರ್ಷಗಳ ಕಾಲ ಜೆಸಿ ಬೋಸ್ ನ್ಯಾಷನಲ್ ಫೆಲೋಶಿಪ್ ಪಡೆದಿದ್ದರು. ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಜೈವಿಕ ವಿಜ್ಞಾನ ಪ್ರಶಸ್ತಿ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಹರ್ ಸ್ವರೂಪ್ ಪದಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಿ.ವಿ.ರಾಮನ್ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.


ಡೀನ್, ರಸಾಯನಿಕ ವಿಜ್ಞಾನ ವಿಭಾಗ
ಪ್ರೊ.ಜಿ.ಮುಗೇಶ್
ಇ-ಮೇಲ್: dean.che@iisc.ac.in
ದೂರವಾಣಿ: 91 – 80 – 2293 2810/3354; 2360 2566

ಜಿ. ಮುಗೇಶ್ ಅವರು ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಭಾರತಿದಾಸನ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ 1998 ರಲ್ಲಿ ಐಐಟಿ ಬಾಂಬೆಯಿಂದ ಪಿಎಚ್‌ಡಿ ಪದವಿ ಪಡೆದರು. ಬಳಿಕ ಜರ್ಮನಿಯ ಬ್ರೌನ್ಸ್‌ವೀಗ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ‘ಹಂಬೋಲ್ಟ್ ಫೆಲೋ’ ಆಗಿ ಕೆಲಸ ಮಾಡಿದರು. 2001ರಲ್ಲಿ, ಅಮೆರಿಕದ ‘ಲಾ ಜೊಲ್ಲಾ’ ಸ್ಕ್ರಿಪ್ಪ್ಸ್ ರಿಸರ್ಚ್ ಸಂಸ್ಥೆಯಲ್ಲಿ ಸ್ಕಾಗ್ಸ್ ಪೋಸ್ಟ್‌ ಡಾಕ್ಟರಲ್ ಫೆಲೋ ಆಗಿ ಕೆಲಸ ಮಾಡಿ, 2002 ರಲ್ಲಿ ಐಐಎಸ್‌ಸಿಗೆ ಸೇರ್ಪಡೆಗೊಂಡರು. ಪ್ರಸ್ತುತ ಅವರು ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ರಾಸಾಯನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಇವರ ಸಂಶೋಧನೆಗಳು, ರಾಸಾಯನಿಕ ಸಂಶ್ಲೇಷಣೆ ಮತ್ತು ಕೃತಕ ಕಿಣ್ವಗಳು ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿವೆ. ಅವರು, ಇನ್ಫೋಸಿಸ್ ಪ್ರಶಸ್ತಿ, ಸಿಆರ್‌ಎಸ್‌ಐ ಬೆಳ್ಳಿ ಪದಕ, ಜೆ. ಸಿ. ಬೋಸ್ ರಾಷ್ಟ್ರೀಯ ಫೆಲೋಶಿಪ್, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಅಸ್ಟ್ರಾಜೆನೆಕಾ ಎಕ್ಸಲೆನ್ಸ್ ಇನ್ ಕೆಮಿಸ್ಟ್ರಿ ಪ್ರಶಸ್ತಿ, ಸ್ವರ್ಣಜಯಂತಿ ಫೆಲೋಶಿಪ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಫೆಲೋಶಿಪ್‌ಗಳನ್ನು ಪಡೆದಿದ್ದಾರೆ. ಅವರು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಡಿಯಾ ಮತ್ತು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಗಳ ಫೆಲೊ ಆಗಿದ್ದಾರೆ. ಪ್ರಸ್ತುತ ಅವರು ಏಷ್ಯನ್ ಕೆಮಿಕಲ್ ಎಡಿಟೋರಿಯಲ್ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಡೀನ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಂಪ್ಯೂಟರ್ ವಿಜ್ಞಾನಗಳ ವಿಭಾಗ
ಪ್ರೊ. ರಾಜೇಶ್ ಸುಂದರೇಸನ್
ಇ-ಮೇಲ್: dean.eecs@iisc.ac.in
ದೂರವಾಣಿ: 91 – 80 – 2293 2808/2773

ರಾಜೇಶ್ ಸುಂದರೇಸನ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಟೆಕ್ ಪದವಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಿಂದ ಹಾಗು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎ ಮತ್ತು ಪಿ‌ಎಚ್‌ಡಿ ಪದವಿಗಳನ್ನು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ನಂತರ ಅವರು Qualcomm Inc. ನಲ್ಲಿ ವೈರ್‌ಲೆಸ್ ಮೋಡೆಮ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡಿದರು. 2005 ರಲ್ಲಿ ಐ‌ಐ‌ಎಸ್‌ಸಿಯನ್ನು ಸೇರಿದ ಅವರು ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗು ಸೈಬರ್ಫಿಸಿಕಲ್ ಸಿಸ್ಟಮ್ಸ್‌ಗಾಗಿ ರಾಬರ್ಟ್ ಬಾಷ್ ಸೆಂಟರ್‌ನಲ್ಲಿ ಸಹಾಯಕ ಅಧ್ಯಾಪಕರಾಗಿದ್ದಾರೆ. ಅವರು ಅರ್ಬಾನಾಚಾಂಪೇನ್‌ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಮನ್ವಯ ವಿಜ್ಞಾನ ಪ್ರಯೋಗಾಲಯವಾದ Qualcomm Inc., ಟೌಲೌಸ್ ಗಣಿತ ಸಂಸ್ಥೆ, ಸ್ಟ್ರಾಂಡ್ ಲೈಫ್ ಸೈನ್ಸಸ್ ಮತ್ತು ಬೆಂಗಳೂರಿನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ನಿರ್ಣಯ ಸಿದ್ಧಾಂತ, ಸಂವಹನ, ಗಣನೆ ಮತ್ತು ನೆಟ್‌ವರ್ಕ್‌ಗಳ ಮೇಲಿನ ನಿಯಂತ್ರಣ, ಸೈಬರ್ಸಾಮಾಜಿಕ ವ್ಯವಸ್ಥೆಗಳು ಮತ್ತು ಇತ್ತೀಚಿನ, ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಗಳಿಗಾಗಿ ಡೇಟಾಚಾಲಿತ ನಿರ್ಧಾರ ಚೌಕಟ್ಟುಗಳು ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿವೆ.


ಡೀನ್, ಅಂತರಇಲಾಖೆಯ ಸಂಶೋಧನಾ ವಿಭಾಗ
ಪ್ರೊ.ನವಕಾಂತ್ ಭಟ್
ಇ-ಮೇಲ್: dean.ids@iisc.ac.in
ದೂರವಾಣಿ: 91-80-2293 2478 / 2636 / 3312
ನವಕಾಂತ ಭಟ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು (1996); ನಂತರ ಅಮೇರಿಕಾದಲ್ಲಿ ಮೊಟೊರೊಲಾದ ಸುಧಾರಿತ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದಲ್ಲಿ (ಆರ್ & ಡಿ ಲ್ಯಾಬ್‌) 3 ವರ್ಷಗಳ ಕಾಲ ಕೆಲಸ ಮಾಡಿದರು. 1999ರಲ್ಲಿ ಐಐಎಸ್ಸಿಗೆ ಅಧ್ಯಾಪಕರಾಗಿ ಸೇರಿದ ಅವರು, ಪ್ರಸ್ತುತ ನ್ಯಾನೋ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಸಂಶೋಧನೆಗಳು ನ್ಯಾನೊ-ಎಲೆಕ್ಟ್ರೊನಿಕ್ಸ್, ಎಲೆಕ್ಟ್ರೋ ಕೆಮಿಕಲ್ ಬಯೋ ಸೆನ್ಸರ್‌ಗಳು ಮತ್ತು ಕೆಮಿ-ರೆಸಿಸ್ಟಿವ್ ಗ್ಯಾಸ್ ಸೆನ್ಸರ್‌ಗಳ ಕ್ಷೇತ್ರಗಳನ್ನು ಒಳಗೊಂಡಿದೆ. ಅವರು ಐಎನ್‌ಎಇ ಮತ್ತು ಐಇಇಇಯ ಫೆಲೋ ಆಗಿದ್ದಾರೆ; ಪ್ರಸ್ತುತ ಐಇಇಇ ಎಲೆಕ್ಟ್ರಾನ್ ಡಿವೈಸಸ್ ಸೊಸೈಟಿಯ ಉಪಾಧ್ಯಕ್ಷರೂ ಆಗಿದ್ದಾರೆ. ಅವರು ಇನ್ಫೋಸಿಸ್ ಪ್ರಶಸ್ತಿ, ಎನ್ಎಎಸ್‍ಐ-ರಿಲಯನ್ಸ್ ಇಂಡಸ್ಟ್ರೀಸ್ ಪ್ಲಾಟಿನಂ ಜುಬಿಲಿ ಪ್ರಶಸ್ತಿ, ಬಿಐಆರ್‍ಎಸಿ- ಇನ್ನೋವೇಟರ್ ಪ್ರಶಸ್ತಿ, ಡಾ.ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಶನ್ ನ್ಯಾಷನಲ್ ಫೆಲೋಶಿಪ್, ಮತ್ತು ಸ್ವರ್ಣಜಯಂತಿ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರು ಪಥ್‌ಶೋಧ್ ಹೆಲ್ತ್‌ಕೇರ್ ಪ್ರೈ.ಲಿ. ಸಹ ಸಂಸ್ಥಾಪಕರೂ ಆಗಿದ್ದಾರೆ. ಇದು ಐಐಎಸ್‍ಸಿಯ ಸ್ಟಾರ್ಟ್ ಅಪ್ ಸಂಸ್ಥೆಯಾಗಿದ್ದು, ಮಧುಮೇಹ, ರಕ್ತಹೀನತೆ ಮತ್ತು ಅಪೌಷ್ಟಿಕತೆ, ಯಕೃತ್ತು ಮತ್ತು ಮೂತ್ರಪಿಂಡ ಕಾಯಿಲೆ ಸೇರಿದಂತೆ ಅನೇಕ ದೀರ್ಘಕಾಲೀನ ಕಾಯಿಲೆಗಳ ಆರಂಭಿಕ ರೋಗನಿರ್ಣಯ ಮತ್ತು ನಿರ್ವಹಣೆಗಾಗಿ ‘ಲ್ಯಾಬ್-ಆನ್-ಪಾಮ್’ ಸಾಧನವನ್ನು ಪ್ರಥಮಬಾರಿಗೆ ಪರಿಚಯಿಸಿದೆ.


ಡೀನ್, ಮೆಕಾನಿಕಲ್ ವಿಜ್ಞಾನ ವಿಭಾಗ
ಪ್ರೊ. ಜಿ ಕೆ ಅನಂತ್ ಸುರೇಶ್
ಇ-ಮೇಲ್: dean.mec@iisc.ac.in
ದೂರವಾಣಿ: 91 – 80 – 2293 2334

ಜಿ. ಕೆ. ಅನಂತಸುರೇಶ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಐ‌ಐಟಿಮದ್ರಾಸ್‌ನಿಂದ, ಸ್ನಾತಕೋತ್ತರ ಪದವಿಯನ್ನು ಟೊಲೆಡೊ ವಿಶ್ವವಿದ್ಯಾಲಯದಿಂದ ಮತ್ತು ಪಿ‌ಎಚ್‌ಡಿಯನ್ನು ಆನ್ ಆರ್ಬರ್‌ನ ಮಿಚಿಗನ್ ವಿಶ್ವವಿದ್ಯಾಲಯದಿಂದ ಗಳಿಸಿದರು. ಮೈಕ್ರೋ‌ಎಲೆಕ್ಟ್ರೋಮೆಕಾನಿಕಲ್ ವ್ಯವಸ್ಥೆಗಳಿಗೆ ಅನುಗುಣವಾದ ಅನುಸರಣಾ ಕಾರ್ಯವಿಧಾನಗಳು ಮತ್ತು ಟೋಪೋಲಜಿ ಆಪ್ಟಿಮೈಸೇಶನ್ ಅನ್ವಯಗಳು, ಕೋಶಗಳ ಬಯೋಮೆಕಾನಿಕ್ಸ್, ಬಯೋಮೆಡಿಕಲ್ ಸಾಧನಗಳು ಮತ್ತು ಮೈಕ್ರೋರೋಬೋಟಿಕ್ಸ್‌ಗಳು ಅವರ ಪ್ರಮುಖ ಸಂಶೋಧನಾ ಆಸಕ್ತಿಗಳು. ಸಂಶೋಧನೆಯ ಜೊತೆಗೆ 285 ಕ್ಕೂ ಹೆಚ್ಚು ಜರ್ನಲ್ ಮತ್ತು ಕಾನ್ಫರೆನ್ಸ್ ಪ್ರಕಟಣೆಗಳು ಮತ್ತು 16 ಪೇಟೆಂಟ್‌ಗಳ ಜೊತೆಗೆ ಅವರ ಸಂಶೋಧನಾ ಗುಂಪು ನಾಲ್ಕು ಸ್ಟಾರ್ಟ್‌ಅಪ್‌ಗಳನ್ನು ಹುಟ್ಟುಹಾಕಿದೆ.

ಅವರು ಎರಡು ಪಠ್ಯಪುಸ್ತಕಗಳು, ಐದು ಸಂಪಾದಿತ ಪುಸ್ತಕಗಳು ಮತ್ತು 17 ಪುಸ್ತಕ ಅಧ್ಯಾಯಗಳ ಸಹಲೇಖಕ ಅಥವಾ ಏಕೈಕ ಲೇಖಕರಾಗಿದ್ದಾರೆ. ಅವರು ಮತ್ತು ಅವರ ವಿದ್ಯಾರ್ಥಿಗಳು 14 ಅತ್ಯುತ್ತಮ ಸಂಶೋಧನಾ ಲೇಖನಗಳು ಮತ್ತು 10 ವಿನ್ಯಾಸಗಳಿಗಾಗಿ ಪ್ರಶಸ್ತಿಗಳನ್ನು ಪಡೆದು ಗುರುತಿಸಲ್ಪಟ್ಟಿದ್ದಾರೆ. ಅವರ ಕಾರ್ಯವು ನ್ಯಾಷನಲ್ ಸೈನ್ಸ್ ಫೌಂಡೇಶನ್ (ಯು‌ಎಸ್‌ಎ) ಆರಂಭಿಕ ವೃತ್ತಿಜೀವನ ಪ್ರಶಸ್ತಿ, ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ ರಾಲ್ಫ್ ಆರ್ ಟೀಟರ್ ಎಜುಕೇಷನಲ್ ಅವಾರ್ಡ್ ಜೊತೆಗೆ ಸ್ವರ್ಣಜಯಂತಿ ಫೆಲೋಶಿಪ್, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಮತ್ತು ಭಾರತ ಸರ್ಕಾರದ ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಶನ್ ನ್ಯಾಷನಲ್ ಫೆಲೋಶಿಪ್‌ನಿಂದ ಗುರುತಿಸಲ್ಪಟ್ಟಿದೆ.


ಡೀನ್, ಭೌತಿಕ ಮತ್ತು ಗಣಿತ ವಿಜ್ಞಾನ ವಿಭಾಗ
ಪ್ರೊ. ಕೌಶಲ್ ವರ್ಮಾ
ಇ-ಮೇಲ್: dean.phy@iisc.ac.in
ದೂರವಾಣಿ: 91 – 80 – 2293 3216

ಕೌಶಲ್ ವರ್ಮಾ ಅವರು ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಭೌತಶಾಸ್ತ್ರದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ; ನಂತರ ಬ್ಲೂಮಿಂಗ್ಟನ್‌ನ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 2004 ರಲ್ಲಿ ಐಐಎಸ್‌ಸಿ ಸೇರಿದ ಅವರು ಪ್ರಸ್ತುತ ಗಣಿತ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಅವರು ಸ್ವರ್ಣಜಯಂತಿ ಫೆಲೋಶಿಪ್ ಮತ್ತು ಎಸ್.ಎಸ್.ಭಟ್ನಾಗರ್ ಪುರಸ್ಕಾರ ಪಡೆದಿದ್ದಾರೆ. ಸಂಕೀರ್ಣ ವಿಶ್ಲೇಷಣೆ, ವಿಭಿನ್ನ ಜ್ಯಾಮಿತಿ ಮತ್ತು ಗಣಿತದ ಇತಿಹಾಸ ಮುಂತಾದವು ಅವರ ಆಸಕ್ತಿ ವಿಷಯಗಳು.