ಕುಡಿಯುವ ನೀರಿನಲ್ಲಿ ವಿಷಕಾರಿ/ಮಾರಕ ಪಾದರಸವನ್ನು ಪತ್ತೆ ಹಚ್ಚುವ ಸಂವೇದಕ/ಸೆನ್ಸರುಗಳು

– ಸುಕೃತಿ ಕಪೂರ್

ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯವು ಮೂಲಭೂತ ಮಾನವ ಹಕ್ಕು. ಕುಡಿಯುವ ನೀರು ಮೂಲಗಳು ಕಲುಷಿತವಾಗಿರುವುದು ಒಂದು ಗಂಭೀರ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾದ್ದರಿಂದ ವಿಶ್ವ ಆರೋಗ್ಯ ಸಂಸ್ಥೆಯು ನೀರಿನಲ್ಲಿ ಮಾರಕಮಾಲಿನ್ಯಕಾರಕಗಳ ನಿರ್ದಿಷ್ಟ ಮಿತಿಯನ್ನು ನಿಗದಿಸಿದೆ. ಮಾಲಿನ್ಯಕಾರಕ ಮಟ್ಟಗಳು ಈ ಮಿತಿಯನ್ನು ಮೀರಿದರೆ ಆ ನೀರನ್ನು ಬಳಕೆಗೆ ಅನರ್ಹವೆಂದು ಪರಿಗಣಿಸಲಾಗುತ್ತದೆ. ಪಾದರಸವು ಮೂತ್ರಪಿಂಡಗಳು ಮತ್ತು ಮೆದುಳಿಗೆ ಹಾನಿಕಾರವಾದ ಅಂತಹ ಒಂದು ಭಾರೀ ಲೋಹ ಮಾಲಿನ್ಯಕಾರಕವಾಗಿದೆ.

ಸಾಂಪ್ರದಾಯಿಕ ಸ್ಪೆಕ್ಟ್ರೋಸ್ಕೋಪಿ ಮೂಲಕ ಪಾದರಸದ ಸಾಂದ್ರತೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಮೌಲ್ಯದಲ್ಲಿ (6 ಮಿಗ್ರಾಂ/ಲೀಟರ್) ನಿಖರವಾಗಿ ನಿರ್ಧರಿಸಬಹುದಾದರೂ ಇದಕ್ಕಾಗಿ ಅತ್ಯಾಧುನಿಕ ಉಪಕರಣಗಳು ಮತ್ತು ನಿರ್ವಹಣೆಗೆ ನುರಿತ ತಜ್ಞರ ಅಗತ್ಯವಿದೆ.

ಐಐಎಸ್ ಸಿ ಮತ್ತು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್ ಸಿಎಎಸ್ ಆರ್) ನ ಸಂಶೋಧಕರು ಸಾಮಾನ್ಯ ಬಳಕೆಗೆ ತರಬಹುದಾದ ಒಂದು ಸೂಕ್ಷ್ಮ, ಸಂಚಾರಿ/ಪೋರ್ಟಬಲ್ ಮತ್ತು ಹಣಮಿಗುತಾಯದ ಫೈಬರ್ ಬ್ರಾಗ್ ಗ್ರೇಟಿಂಗ್ ಸೆನ್ಸರ್ (ಇಎಫ್ ಬಿಜಿ) ತಯಾರಿಸುವಲ್ಲಿ ತೊಡಗಿದ್ದಾರೆ. ಈ ಸೆನ್ಸರಿನ ಮೇಲ್ಮೈಯನ್ನು ಸಿಸ್ಟೈನ್-ಸಂಯೋಜಿತ ನಾಫ್ಥಲೀನ್ ಡೈಮೈಡ್ (ಸಿಎನ್ ಸಿ) ಬೋಲಾಂಫಿಫಿಲೆ ಅಣುಗಳಿಂದ ಲೇಪಿಸಲಾಗಿದೆ. ಸಿಎನ್ ಸಿ ಮತ್ತು ಪಾದರಸಗಳ ಅಂತರ ಕ್ರಿಯೆಯು ಸೆನ್ಸರಿಗೆ ನಿರ್ದಿಷ್ಟತೆಯನ್ನು ಒದಗಿಸಿ ಪರೀಕ್ಷಾ ಸ್ಯಾಂಪಲುಗಳಲ್ಲಿ ಅತಿ ಸೂಕ್ಷ್ಮ ಪ್ರಮಾಣದ ಪಾದರಸವನ್ನು (0.0000003 mg/ಲೀಟರ್ ವರೆಗೆಅಥವಾ ಅಪಾಯಕಾರಿ ಮಿತಿಗಿಂತ 10 ಮಿಲಿಯನ್ ಪಟ್ಟು ಕಡಿಮೆ) ಪತ್ತೆಹಚ್ಚುವ ಸಾಮರ್ಥ್ಯವನ್ನು ನೀಡುತ್ತದೆ. ಸಾಮಾನ್ಯ ಮನೆಯ ನಲ್ಲಿ ನೀರಿನಲ್ಲೂ ಸೆನ್ಸರ್ ಉತ್ತಮ ಫಲಿತಾಂಶಗಳನ್ನು ನೀಡಿದೆ. ಇದು ನೀರು ಮೂಲಗಳಲ್ಲಿ ಪಾದರಸದ ಮಾಲಿನ್ಯದ ರಿಯಲ್ ಟೈಂ ಪರೀಕ್ಷೆಯ ಸಾಮರ್ಥ್ಯವನ್ನು ಹೊಂದಿದೆ.

ಉಲ್ಲೇಖ:

ಕವಿತಾ ಬಿಎಸ್, ಶ್ರೀದೇವಿ ಎಸ್, ಪಂಡೀಶ್ವರ ಮಕಂ, ದೇಬಾಸಿಸ್ ಘೋಷ್, ತಿಮ್ಮಯ್ಯ ಗೋವಿಂದರಾಜು, ಅಶೋಕನ್ ಎಸ್, ಎ ಕೆ ಸೂದ್ (2021), ಹೈಲಿ ಸೆನ್ಸಿಟಿವ್ ಅಂಡ್ ರಾಪಿಡ್ ಡಿಟೆಕ್ಷನ್ ಆಫ್ ಮರ್ಕುರಿ ಇನ್ ವಾಟರ್ ಎಚ್ಡ್ ಫೈಬರ್ ಬ್ರಾಗ್ ಗ್ರೇಟಿಂಗ್ ಸೆನ್ಸರ್, ಸೆನ್ಸರ್ ಮತ್ತು ಆಕ್ಯೂವೇಟರ್ ಬಿ: ರಾಸಾಯನಿಕ, ಸಂಪುಟ 333 .

https://doi.org/10.1016/j.snb.2021.129550

https://www.scientedirect.com/science/article/pii/S0925400521001180

ಲ್ಯಾಬ್ ವೆಬ್‌ಸೈಟ್‌ಗಳು:

http://iap.iisc.ac.in/~sasokan/

http://www.physics.iisc.ac.in/~asood/